ಭಾರತ-ಅಫ್ಘಾನ್ ವಿರುದ್ಧ ಯುದ್ಧ ಮಾಡಲು ನಾವು ಸಿದ್ಧ: ಪಾಕ್ ರಕ್ಷಣಾ ಸಚಿವ
Oct. 17, 2025, 1:48 p.m.ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಭಾರತ ಮತ್ತು ಅಫ್ಘಾನಿಸ್ತಾನ ವಿರುದ್ಧ ಯುದ್ಧಕ್ಕೆ ಸಿದ್ಧ ಎಂದು ಎಚ್ಚರಿಸಿದ್ದಾರೆ. ಅಫ್ಘಾನ್ ವಿದೇಶಾಂಗ ಸಚಿವ ಭಾರತಕ್ಕೆ ಭೇಟಿ ನೀಡಿದ ನಂತರ ಪಾಕ್ ಈ ಹೇಳಿಕೆ ನೀಡಿದೆ. ತಾಲಿಬಾನ್ ಜೊತೆ ಪಾಕ್ ಗಡಿ ಸಂಘರ್ಷ ತೀವ್ರಗೊಂಡಿದ್ದು, ಪಾಕಿಸ್ತಾನದ ಮಿಲಿಟರಿಗೆ ಮುಜುಗರ ಉಂಟಾಗಿದೆ. ಈ ವೇಳೆ ಭಾರತದ ಪರ ತಾಲಿಬಾನ್ ಕಾರ್ಯನಿರ್ವಹಿಸುತ್ತಿದೆ ಎಂದು ಆಸಿಫ್ ಆರೋಪಿಸಿದ್ದಾರೆ.








