TOP AD

ಉಪ ರಾಷ್ಟ್ರಪತಿ ರಾಧಾಕೃಷ್ಣನ್​ ಚೆನ್ನೈ ನಿವಾಸಕ್ಕೆ ಹುಸಿ ಬಾಂಬ್​ ಬೆದರಿಕೆ

India:

Font size:

ನೆರೆ ರಾಜ್ಯ ತಮಿಳುನಾಡಿನಲ್ಲಿ ಹುಸಿ ಬಾಂಬ್​ ಬೆದರಿಕೆ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇವೆ. ನಟ, ಟಿವಿಕೆ ಅಧ್ಯಕ್ಷ ವಿಜಯ್​ ಮನೆ ಬಳಿಕ ಉಪ ರಾಷ್ಟ್ರಪತಿ ರಾಧಾಕೃಷ್ಣನ್​ ಅವರ ಚೆನ್ನೈ ನಿವಾಸಕ್ಕೆ ಹುಸಿಬಾಂಬ್​ ಬೆದರಿಕೆ ಹಾಕಲಾಗಿದೆ. ವಾರದ ಹಿಂದೆ ಇಂತಹುದೆ ಪ್ರಕರಣ ತಮಿಳುನಾಡಿನ ಮದುರವೋಯಲ್​ನಲ್ಲಿ ವರದಿಯಾಗಿತ್ತು. ಪಾರ್ಕ್​ ಮತ್ತು ದೇಗುಲದಲ್ಲಿ ಬಾಂಬ್​ ಇಟ್ಟಿರೋದಾಗಿ ಬೆದರಿಸಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದರು.

ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರ ಚೆನ್ನೈನಲ್ಲಿರುವ (Chennai) ನಿವಾಸಕ್ಕೆ ಬಾಂಬ್​ ಬೆದರಿಕೆ ಹಾಕಲಾಗಿದೆ. ಮನೆಯಲ್ಲಿ ಬಾಂಬ್​ ಇಟ್ಟಿರೋದಾಗಿ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದು, ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಸಿಬ್ಬಂದಿ ಆಗಮಿಸಿ ಮನೆ ಬಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗದ ಕಾರಣ, ಇದು ಹುಸಿ ಬಾಂಬ್​ ಬೆದರಿಕೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಇತ್ತೀಚೆಗೆ ಹುಸಿ ಬಾಂಬ್​ ಬೆದರಿಕೆ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ನಟ, ಟಿವಿಕೆ ಅಧ್ಯಕ್ಷ ವಿಜಯ್​ ಮನೆಯಲ್ಲಿಯೂ ಬಾಂಬ್​ ಇಟ್ಟಿರೋದಾಗಿ ವ್ಯಕ್ತಿಯೋರ್ವ ಪೊಲೀಸ್​ ಕಂಟ್ರೋಲ್​ ರೂಂಗೆ ಕರೆ ಮಾಡಿ ತಿಳಿಸಿದ್ದ. ಮಾಹಿತಿ ಆಧರಿಸಿ ವಿಜಯ್​ ಮನೆಯಲ್ಲಿ ಪರಿಶೀಲಿಸಿದಾಗ ಇದು ಹುಸಿಬಾಂಬ್​ ಕರೆ ಎಂಬುದು ಗೊತ್ತಾಗಿತ್ತು. ಘಟನೆ ಸಂಬಂಧ 38 ವರ್ಷದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದರು.

Comments

Leave a Comment

Prev Post ಹಾಸನಾಂಬೆ ಉತ್ಸವಕ್ಕೆ ನನ್ನ ತಾಯಿ ಕೈಹಿಡಿದು ಬರುತ್ತಿದ್ದಾಗಿನಿಂದ ನೋಡಿದ್ದೇನೆ: ಬಾಲ್ಯದ ನೆನಪು ಮೆಲುಕು ಹಾಕಿದ ಬಾನು ಮುಷ್ತಾಕ್
Next Post ಭಾರತ-ಅಫ್ಘಾನ್ ವಿರುದ್ಧ ಯುದ್ಧ ಮಾಡಲು ನಾವು ಸಿದ್ಧ: ಪಾಕ್​​ ರಕ್ಷಣಾ ಸಚಿವ
AD 5