TOP AD

ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತಿದೆ ಕೇರಳದ ಸುಸಜ್ಜಿತ ಹವಾನಿಯಂತ್ರಿತ ಈ ಸರ್ಕಾರಿ ಶಾಲೆ

Kerala:

Font size:

ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆಯಿಲ್ಲ. ಇದಕ್ಕೆ ಉದಾಹರಣೆಯಂತೆ ಕೇರಳದ ಈ ಶಾಲೆ. ಇದು ಸಂರ್ಪೂಣ ಹವಾನಿಯಂತ್ರಿತವಾಗಿದೆ. ಕೇರಳದ ಮುತ್ತಿಪ್ಪಾಡಿಯಲ್ಲಿ ಆಧುನಿಕ ಹೈಟೆಕ್ ಶಾಲೆಯೂ ನಿರ್ಮಾಣಗೊಂಡಿದ್ದು, ಅಕ್ಟೋಬರ್ 19 ರಂದು ಉದ್ಘಾಟನೆ ನಡೆಯಲಿದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಮುತ್ತಿಪಾಡಿಯಲ್ಲಿ ಆಧುನಿಕ ಹೈಟೆಕ್ ಶಾಲೆಯ ನಿರ್ಮಾಣ ಪೂರ್ಣಗೊಂಡಿದೆ. ಅಕ್ಟೋಬರ್ 19 ರಂದು ಉದ್ಘಾಟನೆ ನಡೆಯಲಿದ್ದು, ಸಂಸದ ಇ ಟಿ ಮುಹಮ್ಮದ್ ಬಶೀರ್ ಸಂಜೆ 4 ಗಂಟೆಗೆ ಉದ್ಘಾಟಿಸಲಿದ್ದಾರೆ. ಈ ಶಾಲೆಯಲ್ಲಿ ಎಂಟು ತರಗತಿ ಕೊಠಡಿಗಳು, ಸಿಬ್ಬಂದಿ ಕೊಠಡಿ, ಕಂಪ್ಯೂಟರ್ ಲ್ಯಾಬ್, ಹೆಚ್ ಎಂ ಕಚೇರಿ ಮತ್ತು ಗ್ರಂಥಾಲಯವನ್ನು ಒಳಗೊಂಡಿದ್ದು, ಇಡೀ ಶಾಲೆಯನ್ನು ಹವಾನಿಯಂತ್ರಣಗೊಳಿಸಲಾಗಿದೆ. ನೆಲ ಮಹಡಿ ಸುಮಾರು 10,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಇದರ ಜೊತೆಗೆ ಎರಡು ಮಹಡಿಗಳಲ್ಲಿ ಸಂಪೂರ್ಣ ಹವಾನಿಯಂತ್ರಿತ ತರಗತಿ ಕೊಠಡಿಗಳನ್ನು ಜೋಡಿಸಲಾಗಿದೆ.

Comments

Leave a Comment

Prev Post India vs Australia: ಸ್ಟಾರ್ ಬ್ಯಾಟರ್ ಔಟ್: ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI
Next Post Deepavali 2025: ನಕಾರಾತ್ಮಕ ಶಕ್ತಿ ಹೊರಹಾಕಲು ದೀಪಾವಳಿಯಂದು ಮನೆಯ ಈ ಭಾಗಗಳಲ್ಲಿ ದೀಪ ಬೆಳಗಿಸಿ!
AD 5