TOP AD

‘ಕಾಂತಾರ: ಚಾಪ್ಟರ್ 1’ ಎಫೆಕ್ಟ್: ಐಎಂಡಿಬಿ ಇಂಡಿಯಾ ಟ್ರೆಂಡ್​ನಲ್ಲಿ ಟಾಪ್ 2 ಸ್ಥಾನ ಪಡೆದ ರಿಷಬ್-ರುಕ್ಮಿಣಿ

India:

Font size:

'ಕಾಂತಾರ: ಚಾಪ್ಟರ್ 1' ಚಿತ್ರವು ವಿಶ್ವಮಟ್ಟದಲ್ಲಿ ಭಾರಿ ಯಶಸ್ಸು ಕಂಡು, ಸಾವಿರ ಕೋಟಿ ಗಳಿಕೆಯತ್ತ ಸಾಗುತ್ತಿದೆ. ರಿಷಬ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ IMDB ಇಂಡಿಯಾ ಟ್ರೆಂಡಿಂಗ್​ನಲ್ಲಿ ಮೊದಲ ಹಾಗೂ ಎರಡನೇ ಸ್ಥಾನ ಪಡೆದಿದ್ದಾರೆ. ಪ್ರೇಕ್ಷಕರ ನಿರೀಕ್ಷೆ ಮೀರಿ ಗೆದ್ದಿರುವ ಈ ಸಿನಿಮಾ, ಇಬ್ಬರ ಪಾತ್ರಗಳ ಮೂಲಕ ಮತ್ತಷ್ಟು ತೂಕ ಪಡೆದಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಪಡೆದ ಯಶಸ್ಸು ತುಂಬಾನೇ ದೊಡ್ಡದು. ಈ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದ ಕಲೆಕ್ಷನ್ ಸಾವಿರ ಕೋಟಿ ರೂಪಾಯಿ ಸಮೀಪಿಸುತ್ತಿದೆ. ರಿಷಬ್ ಶೆಟ್ಟಿ (Rishab Shetty) ಹಾಗೂ ರುಕ್ಮಿಣಿ ವಸಂತ್ ಅವರ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೆಂಡ್ ಆಗುತ್ತಿದೆ. ರಿಷಬ್ ಹಾಗೂ ರುಕ್ಮಿಣಿ ಹೆಸರು ಐಎಂಡಿಬಿ ಇಂಡಿಯಾ ಟ್ರೆಂಡ್​ನಲ್ಲಿ ಅನುಕ್ರಮವಾಗಿ ಒಂದು ಹಾಗೂ ಎರಡನೇ ಸ್ಥಾನ ಪಡೆದುಕೊಂಡಿವೆ.
ಕಾಂತಾರ: ಚಾಪ್ಟರ್ 1’ ಸಿನಿಮಾ ಬಗ್ಗೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆಯನ್ನೂ ಮೀರಿ ಸಿನಿಮಾ ಗೆಲುವು ಕಂಡಿದೆ. ರಿಷಬ್ ಪಾತ್ರಕ್ಕೆ ಸಾಕಷ್ಟು ತೂಕ ಇದೆ. ಅದೇ ರೀತಿ, ರುಕ್ಮಿಣಿ ಪಾತ್ರ ಸಾಕಷ್ಟು ಶೇಡ್​ಗಳನ್ನು ಹೊಂದಿದೆ. ಈ ಪಾತ್ರಗಳು ಸಿನಿಮಾ ತೂಕ ಹೆಚ್ಚಿಸಿದೆ. ಈಗ ಇವರ ಹೆಸರು ಟ್ರೆಂಡ್​ನಲ್ಲಿರುವ ಬಗ್ಗೆ ಐಎಂಡಿಬಿ ಮಾಹಿತಿ ನೀಡಿದೆ.

Comments

Leave a Comment

Prev Post ಗುಜರಾತ್ ಹೊಸ ಕ್ಯಾಬಿನೆಟ್: ಹರ್ಷ್ ಸಾಂಘ್ವಿ ಅತ್ಯಂತ ಕಿರಿಯ ಡಿಸಿಎಂ; ರವೀಂದ್ರ ಜಡೇಜಾ ಪತ್ನಿ ಸೇರಿ 26 ಮಂತ್ರಿಗಳು
AD 5