Font size:
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಭಾರತ ಮತ್ತು ಅಫ್ಘಾನಿಸ್ತಾನ ವಿರುದ್ಧ ಯುದ್ಧಕ್ಕೆ ಸಿದ್ಧ ಎಂದು ಎಚ್ಚರಿಸಿದ್ದಾರೆ. ಅಫ್ಘಾನ್ ವಿದೇಶಾಂಗ ಸಚಿವ ಭಾರತಕ್ಕೆ ಭೇಟಿ ನೀಡಿದ ನಂತರ ಪಾಕ್ ಈ ಹೇಳಿಕೆ ನೀಡಿದೆ. ತಾಲಿಬಾನ್ ಜೊತೆ ಪಾಕ್ ಗಡಿ ಸಂಘರ್ಷ ತೀವ್ರಗೊಂಡಿದ್ದು, ಪಾಕಿಸ್ತಾನದ ಮಿಲಿಟರಿಗೆ ಮುಜುಗರ ಉಂಟಾಗಿದೆ. ಈ ವೇಳೆ ಭಾರತದ ಪರ ತಾಲಿಬಾನ್ ಕಾರ್ಯನಿರ್ವಹಿಸುತ್ತಿದೆ ಎಂದು ಆಸಿಫ್ ಆರೋಪಿಸಿದ್ದಾರೆ.
ಪಾಕಿಸ್ತಾನ (Pakistan) ಭಾರತದ ವಿರುದ್ಧ ಒಂದಲ್ಲ ಒಂದು ಹೇಳಿಕೆ ನೀಡುತ್ತ ಬಂದಿದೆ. ಅದರೆ ಇಲ್ಲಿಯವರೆಗೆ ನೀಡಿದ ಹೇಳಿಕೆಯಂತೆ ಪಾಕ್ ನಡೆದುಕೊಂಡಿಲ್ಲ. ಈ ಹಿಂದೆ ಭಾರತವನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದ ಪಾಕಿಸ್ತಾನ ಇದೀಗ ಅಫ್ಘಾನಿಸ್ತಾನದ ವಿರುದ್ಧವು ಕಿಡಿಕಾರಿದೆ. ಯಾವಾಗ ಅಫ್ಘಾನಿಸ್ತಾನದ ತಾಲಿಬಾನ್ ವಿದೇಶಾಂಗ ಸಚಿವ ಭಾರತಕ್ಕೆ ಬಂದ್ರು ಅಲ್ಲಿಂದ ಪಾಕಿಸ್ತಾನಕ್ಕೆ ಉರಿ ಶುರುವಾಗಿದೆ. ಇದೀಗ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif) ಭಾರತ ಹಾಗೂ ಅಫ್ಘಾನಿಸ್ತಾನದ ವಿರುದ್ಧ ಯುದ್ಧ ಅಗತ್ಯತೆ ಬಗ್ಗೆ ಮಾತನಾಡಿದ್ದಾರೆ. ಅಗತ್ಯವಿದ್ದರೆ ಇಸ್ಲಾಮಾಬಾದ್ ಎರಡು ಕಡೆ ಯುದ್ಧ ಮಾಡಲು ಸಿದ್ಧವಾಗಿದೆ, ಒಂದು ತಾಲಿಬಾನ್ ವಿರುದ್ಧ ಮತ್ತು ಇನ್ನೊಂದು ಭಾರತದ ವಿರುದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.
Posted 1 month ago









Comments
Leave a Comment