TOP AD

ಹಾಸನಾಂಬೆ ಉತ್ಸವಕ್ಕೆ ನನ್ನ ತಾಯಿ ಕೈಹಿಡಿದು ಬರುತ್ತಿದ್ದಾಗಿನಿಂದ ನೋಡಿದ್ದೇನೆ: ಬಾಲ್ಯದ ನೆನಪು ಮೆಲುಕು ಹಾಕಿದ ಬಾನು ಮುಷ್ತಾಕ್

Hassan:

Font size:

ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಭಾನು ಮುಷ್ತಾಕ್​ ಅವರು ಇಂದು ಕುಟುಂಬ ಸಮೇತರಾಗಿ ಹಾಸನಾಂಬೆಯ ದರ್ಶನ ಪಡೆದುಕೊಂಡರು. ಬಳಿಕ ಮಾತನಾಡಿರುವ ಅವರು, ಇದು ನನಗೆ ಮೊದಲೇನಲ್ಲ, ನನ್ನ ತಾಯಿ ಕೈಹಿಡಿದು ಬರುತ್ತಿದ್ದಾಗಿನಿಂದ ನೋಡಿದ್ದೇನೆ ಎಂದು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.

ಹಾಸನಾಂಬೆ (Hasanamba) ದರ್ಶನ ಇದು ನನಗೆ ಮೊದಲಲ್ಲ. ನನ್ನ ತಾಯಿಯ ಕೈಹಿಡಿದು ಬರುತ್ತಿದ್ದಾಗಿನಿಂದ ನೋಡಿದ್ದೇನೆ. ಆಗ ನಿಮ್ಮಗೆ ಕಾಣಿಸಿಕೊಳ್ಳುತ್ತಿರಲಿಲ್ಲ ಇದೀಗ ಕಾಣಿಸಿಕೊಳ್ಳುತ್ತಿದ್ದೇನೆ. ಮುಸ್ಲಿಮರು ಹಾಸನಾಂಬೆಯನ್ನ ಹುಸೇನ್ ಬಿ ಎಂದು ನಂಬುತ್ತಿದ್ದರು. ಇದೊಂದು ಭಾವೈಕ್ಯತೆಯ ಸಂಕೇತವೂ ಆಗಿದೆ ಎಂದು ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಭಾನು ಮುಷ್ತಾಕ್ (Banu Mushtaq) ಹೇಳಿದ್ದಾರೆ.
ಹಾಸನಾಂಬೆ ದರ್ಶನ ಪಡೆದು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಭಾನು ಮುಷ್ತಾಕ್, ಬಹಳ ಹಿಂದಿನಿಂದ ನಮ್ಮ ತಾಯಿ ಹಾಗೂ ನಮ್ಮ ಕುಟುಂಬದ ಪೂರ್ವಿಕರಿಂದ ಬಂದಂತ ಗ್ರಹಿಕೆ ಏನೆಂದರೆ ಮುಸ್ಲಿಂ ಸಮುದಾಯದವರು ಕೂಡ ಇಲ್ಲಿ ಹಸೇನ್ ಬಿ ಎಂದು ಹಾಸನಾಂಬೆಗೆ ಹೆಸರು ಕೊಟ್ಟ ಪ್ರಸಂಗವನ್ನು ನಾನು ನೋಡಿದ್ದೇನೆ. ಆ ಒಂದು ಐತಿಹ್ಯ ಕೂಡ ನನಗೆ ಗೊತ್ತಿದೆ ಎಂದರು.

Comments

Leave a Comment

Prev Post ಚಾಮರಾಜನಗರ: ಸಂಬಳ ನೀಡಿಲ್ಲವೆಂದು ಗಾಮ ಪಂಚಾಯಿತಿ ಕಚೇರಿ ಮುಂದೆಯೇ ವಾಟರ್​ಮ್ಯಾನ್ ನೇಣಿಗೆ ಶರಣು
Next Post ಉಪ ರಾಷ್ಟ್ರಪತಿ ರಾಧಾಕೃಷ್ಣನ್​ ಚೆನ್ನೈ ನಿವಾಸಕ್ಕೆ ಹುಸಿ ಬಾಂಬ್​ ಬೆದರಿಕೆ
AD 5